ಬೆಂಗಳೂರು: ಬಿ.ಎಂ.ಸಿ ಹಿರಿಯ ವಿದ್ಯಾರ್ಥಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮೂವರು ಹಿರಿಯ ವೈದ್ಯರಿಗೆ ಪ್ರತಿಷ್ಠಿತ ಅತಿ ವಿಶಿಷ್ಟ ಹಿರಿಯ ವಿದ್ಯಾರ್ಥಿ(ಅಲ್ಯೂಮ್ನಿ) ಪ್ರಶಸ್ತಿ, ಏಳು ಗುರುಗಳಿಗೆ ಅತ್ಯುತ್ತಮ ಗುರುಗಳು ಪ್ರಶಸ್ತಿ ನೀಡಲಾಗುತ್ತದೆ. 1955ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ (ಬಿ.ಎಂ.ಸಿ) ವೈದ್ಯಕೀಯ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಸಾಧಿಸಿದ್ದು, ವಿಶ್ವದಾದ್ಯಂತ ಅದರ ಹಳೆಯ ವಿದ್ಯಾರ್ಥಿಗಳು ಆರೋಗ್ಯಕ್ಷೇತ್ರದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ, ನೀಡುತ್ತಿದ್ದಾರೆ.ಭಾರತದ ಸ್ವಾತಂತ್ರ‍್ಯ ದಿನಾಚರಣೆಯಾದ ಆಗಸ್ಟ್ 15ರಂದು, ನಮ್ಮ ವಾರ್ಷಿಕ ಹಿರಿಯ ವಿದ್ಯಾರ್ಥಿಗಳ ದಿನಾಚರಣೆಯನ್ನು ಆಯೋಜಿಸಲಾಗಿದೆ.ಈ ಸಾರಿಯ ಹಿರಿಯ ವಿದ್ಯಾರ್ಥಿ ದಿನಾಚರಣೆ ಕರ್ನಾಟಕ ಹಾಕಿ ಅಸೋಸಿಯೇಶನ್ ಲಾಂಗ್ ಪೋರ್ಡ್ ಟೌನ್, ಬೆಂಗಳೂರು ಇಲ್ಲಿ ಸಂಜೆ 5.30 ಗಂಟೆಗೆ ನಡೆಯಲಿದೆ.ಕಾರ್ಯಕ್ರಮದಲ್ಲಿ ಮೂವರು ಹಿರಿಯ ವೈದ್ಯರಿಗೆ ಪ್ರತಿಷ್ಠಿತ ಅತಿ ವಿಶಿಷ್ಟ ಹಿರಿಯ ವಿದ್ಯಾರ್ಥಿ(ಅಲ್ಯೂಮ್ನಿ) ಪ್ರಶಸ್ತಿ, ಏಳು ಗುರುಗಳಿಗೆ ಅತ್ಯುತ್ತಮ ಗುರುಗಳು ಪ್ರಶಸ್ತಿ ನೀಡಲಾಗುತ್ತದೆ.ಈ ಕಾರ್ಯಕ್ರಮವು ಬಿ.ಎಂ.ಸಿ ಹಳೆಯ ವಿದ್ಯಾರ್ಥಿಗಳನ್ನು ಜಾಗತಿಕವಾಗಿ ಪರಸ್ಪರ ಭೇಟಿ ಮಾಡಲು, ಹಳೆಯ ನೆನಪುಗಳನ್ನು ಹಂಚಿಕೊಳ್ಳಲು ಮತ್ತುತಮ್ಮ ಪರಂಪರೆಯನ್ನು ಸಂಭ್ರಮಿಸಲು ಪರ್ವ ದಿನವಾಗಿರುತ್ತದೆ ಎಂದು ಬೆ.ಮೆ ಅ.ಅ. ಮತ್ತು ಡಿ.ಟಿ ಹಾಗೂ ಕಾರ್ಯಕಾರಿ ಸಮಿತಿ ಅಧ್ಯಕ್ಷ ಡಾ. ಆರ್.ಕೆ.ಸರೋಜ ತಿಳಿಸಿದ್ದಾರೆ.